ಚೈತ್ರಾ ಅಂಬಾಡಿಪುಡಿ ಭಾರತದ ಹೈದರಾಬಾದ್‌ನ ಭಾರತೀಯ ಹಿನ್ನೆಲೆ ಗಾಯಕಿ . ಅವರು ಪ್ರಧಾನವಾಗಿ ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಯ ಚಲನಚಿತ್ರಗಳಿಗೆ ಹಾಡಿದರು. == ಆರಂಭಿಕ ಜೀವನ ಮತ್ತು ಬಾಲ್ಯ == ಚೈತ್ರಾ ಅವರು ೧೦ ನೇ ವಯಸ್ಸಿನಲ್ಲಿ ಅನೌಪಚಾರಿಕವಾಗಿ ಸಂಗೀತವನ್ನು ಕಲಿಯಲು ಪ್ರಾರಂಭಿಸಿದರು. ಅವರ ಪೋಷಕರು ರಮಣ ಮೂರ್ತಿ ಮತ್ತು ಪದ್ಮ ಪ್ರಿಯಾ ಅವರು ವೃತ್ತಿಪರವಾಗಿ ತರಬೇತಿ ಪಡೆಯದಿದ್ದರೂ, ಸಂಗೀತವನ್ನು ಕೇಳುವುದರಿಂದ ಅವರು ಗಮನಿಸಿದ್ದನ್ನು ಮಗಳಿಗೆ ಕಲಿಸಿದರು. ಅನೌಪಚಾರಿಕ ಪಠ್ಯಕ್ರಮವು ೧೯೫೦ ಮತ್ತು ೧೯೬೦ ರ ದಶಕದ ೨೦೦ ಕ್ಕೂ ಹೆಚ್ಚು ಭಾರತೀಯ ಚಲನಚಿತ್ರ ಹಾಡುಗಳನ್ನು ಒಳಗೊಂಡಿತ್ತು, ಇದು ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಆಳವಾಗಿ ಬೇರೂರಿದೆ. ಅಂತಿಮವಾಗಿ ಚೈತ್ರಾ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತವನ್ನು ಭಾರತದ ಬೆಂಗಳೂರಿನಲ್ಲಿ ಶ್ರೀಮತಿ ಗೀತಾ ಹೆಡ್ಗೆ ಅವರಿಂದ ಕಲಿತರು. == ವೃತ್ತಿ == ೨೦೦೪ ರಲ್ಲಿ ೧೨ ನೇ ವಯಸ್ಸಿನಲ್ಲಿ ಚೈತ್ರಾ ಅವರು ತಮ್ಮ ಮೊದಲ ತೆಲುಗು ಹಿನ್ನಲೆ ಗೀತೆ ತೊಲಿ ತೊಲಿಗಾವನ್ನು ಧ್ವನಿಮುದ್ರಿಸುವ ಮೂಲಕ ತಮ್ಮ ಹಿನ್ನೆಲೆ ಗಾಯನ ವೃತ್ತಿಜೀವನವನ್ನು ದಿವಂಗತ ಶ್ರೀ ಚಕ್ರಿ ರಚಿಸಿದ ಅಂಡಾರು ಡೊಂಗಲೆ ದೊರಿಕಿತೆ ಚಲನಚಿತ್ರಕ್ಕಾಗಿ ಪ್ರಾರಂಭಿಸಿದರು. ೨೦೦೫ ರಲ್ಲಿ ದಿವಂಗತ ಶ್ರೀ ಎಸ್ ಪಿ ಬಾಲಸುಬ್ರಹ್ಮಣ್ಯಂ ಅವರು ನಡೆಸಿಕೊಟ್ಟ ಎಮ್‌‌ಎ‌ಎ ಟಿವಿಯಲ್ಲಿ ಪ್ರಸಾರವಾದ ಪಾದಲನಿ ಉಂಡಿ ಗಾಯನ ಕಾರ್ಯಕ್ರಮವನ್ನು ಚೈತ್ರ ಅವರು ಸ್ಪರ್ಧಿಸಿ ಗೆಲುವಿನ ಕೀರಿಟ ಪಡೆದರು. === ಧ್ವನಿಮುದ್ರಿಕೆ === == ಉಲ್ಲೇಖಗಳು ==